ನವೀನ್ ಕೃಷ್ಣ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನಟ, ನಿರ್ದೇಶಕ ಮತ್ತು ಬರಹಗಾರ ಆಗಿದ್ದಾರೆ. ಬಾಲನಟನಾಗಿ ಅನೇಕ ಚಲನಚಿತ್ರಗಳಲ್ಲಿ ನಟಿಸಿದ ನಂತರ ಅವರು ಶ್ರೀರಸ್ತು ಶುಭಮಸ್ತು (2000) ಚಿತ್ರದಲ್ಲಿ ಪ್ರಥಮಬಾರಿಗೆ ವಯಸ್ಕರಾಗಿ ನಟನೆ ಮಾಡಿದರು ಮತ್ತು ಅಂದಿನಿಂದ ವಿವಿಧ ಚಲನಚಿತ್ರಗಳಲ್ಲಿ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕದಂಬ (2004) ನೆನಪಿರಲಿ (2005) ಧಿಮಾಕು (2008) ಮತ್ತು ಮತ್ತೊಂದು ಮಧುವೇನಾ (2011). ಹಗ್ಗದ ಕೊನೆ (2014) ಮತ್ತು ಆಕ್ಟರ್ (2016) ಚಿತ್ರಗಳಲ್ಲಿನ ಅವರ ಪ್ರಮುಖ ಪಾತ್ರಗಳು ಅವರಿಗೆ ಹಲವಾರು ಪ್ರಶಸ್ತಿಗಳು ಮತ್ತು ಮೆಚ್ಚುಗೆಯನ್ನು ಗಳಿಸಿಕೊಟ್ಟಿವೆ. 2013ರಲ್ಲಿ, ಲಕ್ಷ್ಮಿ ಬಾರ್ ಎಂಬ ಹೆಸರಿನ ಚಿತ್ರವನ್ನು ನಿರ್ದೇಶಿಸುವುದಾಗಿ ಮತ್ತು ಚಿತ್ರಕಥೆ ಬರೆಯುವುದಾಗಿ ನವೀನ್ ಘೋಷಿಸಿದರು. ಅವರು ಬಿಡಲಾರೆ ಎಂದೂ ನಿನ್ನಾ (2013) ಚಿತ್ರಕ್ಕೆ ಸಹ - ನಿರ್ದೇಶನವನ್ನು ಮಾಡಿದರು. == ವೈಯಕ್ತಿಕ ಜೀವನ == ನವೀನ್ ಅವರು ಕನ್ನಡ ನಟ ಶ್ರೀನಿವಾಸ ಮೂರ್ತಿ ಮತ್ತು ಪುಷ್ಪ ದಂಪತಿಗೆ ಬೆಂಗಳೂರಿನಲ್ಲಿ ಜನಿಸಿದರು. ಅವರಿಗೆ ಮೂವರು ಒಡಹುಟ್ಟಿದವರಿದ್ದಾರೆ. ಅವರ ಸಹೋದರ ನಿತಿಲ್ ಕೃಷ್ಣ ಕೂಡ ಚಲನಚಿತ್ರ ನಟರಾಗಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಅವರು ಈ ಹಿಂದೆ ಎರಡು ಬಾರಿ ಅಕ್ಷಯ್ ಕೃಷ್ಣ ಮತ್ತು ನಂತರ ಎಸ್. ಎಸ್. ಕೃಷ್ಣ ಎಂದು ತಮ್ಮ ಪರದೆಯ ಹೆಸರನ್ನು ಬದಲಾಯಿಸಿದ್ದಾರೆ. ಆದರೆ, ಯಾವುದೇ ತೃಪ್ತಿದಾಯಕ ಫಲಿತಾಂಶಗಳನ್ನು ದೊರೆಯದ ಕಾರಣದಿಂದ, ನಂತರ ಅವರು ತಮ್ಮ ಮೂಲ ಹೆಸರನ್ನು ಉಳಿಸಿಕೊಂಡರು. == ಚಲನಚಿತ್ರಗಳ ಪಟ್ಟಿ == == ದೂರದರ್ಶನ == === ನಟನಾಗಿ === === ನಿರ್ದೇಶಕನಾಗಿ === == ಉಲ್ಲೇಖಗಳು == == ಬಾಹ್ಯಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ